ಗಾಂಧಿ, ನೆಹರೂ, ಅಂಬೇಡ್ಕರ್, ಮೌಲಾನಾ ಅಜಾದ್,ಚೆನ್ನಮ್ಮ, ಲಕ್ಷ್ಮಿ ಬಾಯಿ, ಸಾವಿತ್ರಿ ಫುಲೆ, ಭಗತ್ ಸಿಂಗ್, ನೇತಾಜಿ ಬೋಸ್ ಹೀಗೆ ಸ್ವಾತಂತ್ಯ ಹೋರಾಟದಲ್ಲಿ ಭಾಗವಹಿಸಿದ ಮಹಾನಾಯಕರುಗಳ ವೇಷ ತೊಟ್ಟ ವಿದ್ಯಾರ್ಥಿಗಳ ಮೆರವಣಿಗೆ ನೋಡುತ್ತಾ ಸಿದ್ಧಾಪುರ ಪೇಟೆಯ ಜನರು ಸ್ಥಬ್ಧರಾದರು. ಆರು ನೂರು ವಿದ್ಯಾರ್ಥಿಗಳ ಈ ಮೆರವಣಿಗೆಯಲ್ಲಿ ಜೈ ಹಿಂದ್, ವಂದೇ ಮಾತರಂ, ಇಂಕ್ವಿಲಾಬ್ ಜಿಂದಾಬಾದ್ ಮುಂತಾದ ಸ್ವಾತಂತ್ರ್ಯದ ಕಿಚ್ಚನ್ನು ಜೀವಂತವಾಗಿಟ್ಟ ಘೋಷಣೆಗಳು ಮಾರ್ದನಿಸಿದವು. ಶಿಕ್ಊಷಕರು, ಎಸ್ ಡಿ.ಎಮ್.ಸಿ ಪದಾಧಿಕಾರಿಗಳು, ಊರವರು ಈ ಮೆರವಣಿಗೆಯಲ್ಲಿ ಸೇರಿಕೊಂಡು ಪ್ರೋತ್ಸಾಹಿಸಿದರು. ಮೆರವಣಿಗೆಯುದ್ದಕ್ಕೂ ಹಳೆ ವಿದ್ಯಾರ್ಥಿಗಳು ಡ್ರೋನ್ ಕ್ಯಾಮರಾದ ಮೂಲಕ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು. ಮೆರವಣಿಗೆಯ ಅಂತ್ಯದಲ್ಲಿ ಮಕ್ಕಳೆಲ್ಲ 75 ಸಂಖ್ಯೆಯ ವಿನ್ಯಾಸದಲ್ಲಿ ನಿಂತು ಎತ್ತರದ ಡ್ರೋನ್ ಕ್ಯಾಮರಾದ ಕಣ್ಣಿನಲ್ಲಿ ಸೆರೆಯಾದರು.ಕೆಲವು ಚಿತ್ರಗಳು ಇಲ್ಲಿವೆ.
