ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಕುಂದಾಪುರ ತಾಲೂಕು. ತಾಲೂಕಿನ ಅತಿದೊಡ್ಡ ಸರ್ಕಾರಿ ಪ್ರೌಢಶಾಲೆ ಇದು. ಆರುನೂರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 12 ವಿಭಾಗಗಳಿವೆ. ಕನ್ನಡ ಮತ್ತು ಆಂಗ್ಲ ಮಾಧ್ಯಮಗಳೆರಡರಲ್ಲೂ ಕಲಿಕೆ-ಬೋಧನೆಗಳು ನಡೆಯುತ್ತವೆ.
ಗಾಂಧಿ, ನೆಹರೂ, ಅಂಬೇಡ್ಕರ್, ಮೌಲಾನಾ ಅಜಾದ್,ಚೆನ್ನಮ್ಮ, ಲಕ್ಷ್ಮಿ ಬಾಯಿ, ಸಾವಿತ್ರಿ ಫುಲೆ, ಭಗತ್ ಸಿಂಗ್, ನೇತಾಜಿ ಬೋಸ್ ಹೀಗೆ ಸ್ವಾತಂತ್ಯ ಹೋರಾಟದಲ್ಲಿ ಭಾಗವಹಿಸಿದ ಮಹಾನಾಯಕರುಗಳ ವೇಷ ತೊಟ್ಟ ವಿದ್ಯಾರ್ಥಿಗಳ ಮೆರವಣಿಗೆ ನೋಡುತ್ತಾ ಸಿದ್ಧಾಪುರ ಪೇಟೆಯ ಜನರು ಸ್ಥಬ್ಧರಾದರು. ಆರು ನೂರು ವಿದ್ಯಾರ್ಥಿಗಳ ಈ ಮೆರವಣಿಗೆಯಲ್ಲಿ ಜೈ ಹಿಂದ್, ವಂದೇ ಮಾತರಂ, ಇಂಕ್ವಿಲಾಬ್ ಜಿಂದಾಬಾದ್ ಮುಂತಾದ ಸ್ವಾತಂತ್ರ್ಯದ ಕಿಚ್ಚನ್ನು ಜೀವಂತವಾಗಿಟ್ಟ ಘೋಷಣೆಗಳು ಮಾರ್ದನಿಸಿದವು. ಶಿಕ್ಊಷಕರು, ಎಸ್ ಡಿ.ಎಮ್.ಸಿ ಪದಾಧಿಕಾರಿಗಳು, ಊರವರು ಈ ಮೆರವಣಿಗೆಯಲ್ಲಿ ಸೇರಿಕೊಂಡು ಪ್ರೋತ್ಸಾಹಿಸಿದರು. ಮೆರವಣಿಗೆಯುದ್ದಕ್ಕೂ ಹಳೆ ವಿದ್ಯಾರ್ಥಿಗಳು ಡ್ರೋನ್ ಕ್ಯಾಮರಾದ ಮೂಲಕ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು. ಮೆರವಣಿಗೆಯ ಅಂತ್ಯದಲ್ಲಿ ಮಕ್ಕಳೆಲ್ಲ 75 ಸಂಖ್ಯೆಯ ವಿನ್ಯಾಸದಲ್ಲಿ ನಿಂತು ಎತ್ತರದ ಡ್ರೋನ್ ಕ್ಯಾಮರಾದ ಕಣ್ಣಿನಲ್ಲಿ ಸೆರೆಯಾದರು.
No comments:
Post a Comment