ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಇಲ್ಲಿ ವಿಜ್ಞಾನ ಪ್ರದರಶನವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ಔಷದೀಯ ಸಸ್ಯಗಳು, ಜೀವಿಗಳ ಸಂಗ್ರಹಿಸಿದ ಮಾಧರಿಗಳು, ಭೌತಶಾಸ್ತ್ರದ ಕಾರ್ಯನಿರ್ವಹಿಸುವ ಮಾದರಿಗಳು, ರಸಾಯನಶಾಸ್ತ್ರದ ಪ್ರಯೋಗಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಪೂರ್ವಾಹ್ನ ಆಯೋಜಿಸಿದ್ದ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಭಿತ್ತಿಚಿತ್ರ ಪ್ರದರ್ಶನವನ್ನು ವೀಕ್ಷಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಅಶೋಕ ಕಾಮತ್ ಅವರು ದಿನವಿಡೀ ಹಮ್ಮಿಕೊಳ್ಳಲಾದ ವಿಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿದರು.
ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಕುಂದಾಪುರ ತಾಲೂಕು. ತಾಲೂಕಿನ ಅತಿದೊಡ್ಡ ಸರ್ಕಾರಿ ಪ್ರೌಢಶಾಲೆ ಇದು. ಆರುನೂರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 12 ವಿಭಾಗಗಳಿವೆ. ಕನ್ನಡ ಮತ್ತು ಆಂಗ್ಲ ಮಾಧ್ಯಮಗಳೆರಡರಲ್ಲೂ ಕಲಿಕೆ-ಬೋಧನೆಗಳು ನಡೆಯುತ್ತವೆ.
Saturday, 29 February 2020
ಸಿದ್ಧಾಪುರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಇಲ್ಲಿ ವಿಜ್ಞಾನ ಪ್ರದರಶನವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ಔಷದೀಯ ಸಸ್ಯಗಳು, ಜೀವಿಗಳ ಸಂಗ್ರಹಿಸಿದ ಮಾಧರಿಗಳು, ಭೌತಶಾಸ್ತ್ರದ ಕಾರ್ಯನಿರ್ವಹಿಸುವ ಮಾದರಿಗಳು, ರಸಾಯನಶಾಸ್ತ್ರದ ಪ್ರಯೋಗಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಪೂರ್ವಾಹ್ನ ಆಯೋಜಿಸಿದ್ದ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಭಿತ್ತಿಚಿತ್ರ ಪ್ರದರ್ಶನವನ್ನು ವೀಕ್ಷಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಅಶೋಕ ಕಾಮತ್ ಅವರು ದಿನವಿಡೀ ಹಮ್ಮಿಕೊಳ್ಳಲಾದ ವಿಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿದರು.
Wednesday, 26 February 2020
ಅದಿತಿ ಎಸ್ ಕುಲಕರ್ಣಿ -ಎಸ್ ಎಸ್ ಎಲ್ ಸಿ ಯಲ್ಲಿ ಕರ್ನಾಟಕ್ಕೆ ತೃತೀಯ
ಚಿಕ್ಕಂದಿನಿಂದಲೂ ಸಿದ್ಧಾಪುರ ಹೊಸಂಗಡಿ ಪರಿಸರದಲ್ಲಿ ಓದಿಕೊಂಡು ಬಂದ ನಮ್ಮ ಅದಿತಿ ಎಸ್ ಕುಲಕರ್ಣಿ
ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಕೆ ಪಿ ಸಿ ಎಲ್ ಆಂಗ್ಲ ಮಾಧ್ಯಮ ಶಾಲೆಯಲ್ಲೂ ಪ್ರೌಢಶಿಕ್ಷಣವನ್ನು 8ರಿಂದ 10ನೇ ತರಗತಿಯವರೆಗೆ ನಮ್ಮ ಸರಕಾರಿ ಪ್ರೌಢಶಾಲೆಯಲ್ಲಿ ಮುಗಿಸಿರುತ್ತಾರೆ.
ತನ್ನ ಅಸಾಧಾರಣ ಬುದ್ಧಿಶಕ್ತಿಯಿಂದ 623/625 ಅಂಕಗಳನ್ನು ಪಡೆದ ಇವರು ಕ್ರಮವಾಗಿ ಕನ್ನಡ – 125, ಇಂಗ್ಲೀಷ್ – 98, ಹಿಂದಿ - 100, ಗಣಿತ – 100, ವಿಜ್ಞಾನ – 100, ಹಾಗೂ ಸಮಾಜ ವಿಜ್ಞಾನ – 100 ಅಂಕಗಳೊಂದಿಗೆ ತೇರ್ಗಡೆ ಹೊಂದಿ ಕರ್ನಾಟಕ ರಾಜ್ಯಕ್ಕೆ ತೃತೀಯಾ ರ್ಯಾಂಕ್ ಬಂದಿರುತ್ತಾರೆ.
ಇಂದು ಸರಕಾರಿ ಶಾಲೆಯೆಂದರೆ ಸದಾ ಮೂಗು ಮುರಿಯುತ್ತಿರುವ ಈ ಕಾಲ ಘಟ್ಟದಲ್ಲಿ ಇವರ ಹೆತ್ತವರು (ತಂದೆ ಶಶಿಕಾಂತ ಕುಲಕರ್ಣಿ ತಾಯಿ ಶ್ವೇತಾ ಕುಲಕರ್ಣಿ) ಕೆಪಿಸಿಎಲ್ ಹೊಸಂಗಡಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರೂ (ಇಂಜಿನಿಯರ್) ತನ್ನ ಅದ್ವಿತೀಯ ಪ್ರತಿಭೆ ಹೊಂದಿರುವ ತನ್ನ ಮಗಳನ್ನು ಸರಕಾರಿ ಶಾಲೆಗೇ ಸೇರಿಸಬೇಕೆಂಬ ಇವರ ತೀರಾ ಇಚ್ಛಾ ಶಕ್ತಿ ಅವರ ಸರಳತನ ಮಾತ್ರವಲ್ಲ ಸರಕಾರಿ ಶಾಲೆಯ ಮೇಲಿಟ್ಟಿರುವ ಅಪಾರ ನಂಬಿಕೆ ಇಲ್ಲ್ಲಿ ವೇದ್ಯವಾಗುತ್ತದೆ.
ತರಗತಿಯಲ್ಲಿ ಸದಾ ಮುನ್ನಡೆ ಸಾಧಿಸುತ್ತಿರುವ ಕುಮಾರಿ ಅದಿತಿ ಎಸ್ ಕುಲಕರ್ಣಿಯವರು ಯಾವತ್ತೂ ತನ್ನ ಪ್ರೌಢಿಮೆಯನ್ನು ಪ್ರದರ್ಶನ ಮಾಡದೆ ಎಲ್ಲಾ ಸಹಪಾಠಿಗಳನ್ನೂ ನಗು ನಗುತ್ತಲೇ ಸ್ವೀಕರಿಸುವುದರ ಜೊತೆಗೆ ತನ್ನಲ್ಲಿರುವ ಅಪಾರ ಬುದ್ಧಿ ಶಕ್ತಿಯನ್ನು ಸದಾ ಹಂಚಿಕೊಳ್ಳುವ ಇವರ ಗುಣ ಮಹತ್ತರವಾದುದು .
ಕೇವಲ ಪಾಠ ಪ್ರವಚನಗಳಲ್ಲಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಾದ ಹಿಂದೂಸ್ಥಾನಿ ಸಂಗೀತ, ಪೈಂಟಿಂಗ್, ನೃತ್ಯಗಳಲ್ಲಿ ತೊಡಗಿಸಿಕೊಂಡಿರುವುದರ ಜೊತೆಗೆ ಚೆಸ್ ನಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿರುತ್ತಾರೆ. ಅಷ್ಟೇ ಏಕೆ ಸಾಮಾನ್ಯ ಜ್ಞಾನವನ್ನು ಕರತಲಾಮಲಕ ಮಾಡಿಕೊಂಡಿರುವ ಇವರು ಒಂದು ವಿಶ್ವಕೋಶವಿದ್ದಂತೆ .
ತನ್ನ ಗುರುಹಿರಿಯರನ್ನು ಅಪಾರವಾಗಿ ಗೌರವಿಸುವ ಇವರು ಶಾಲೆಯಲ್ಲಿ ತನ್ನ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗವನ್ನು , ಹಿರಿಯ ಕಿರಿಯ ಸಹಪಾಠಿಗಳನ್ನು ಪ್ರೀತಿಯಿಂದ ಕಾಣುವ ಗುಣ ಇವರದು. ಇಂತಹ ಅದ್ವಿತೀಯ ಗುಣವನ್ನು ಹೊಂದಿರುವ ಈ ನಮ್ಮ ಅದಿತಿ ಎಸ್ ಕುಲಕರ್ಣಿಯವರು ನಮ್ಮ ಶಾಲೆಯ ವಿದ್ಯಾರ್ಥಿನಿ ಎಂದು ಹೇಳಿಕೊಳ್ಳಲು ನಮಗೆ ಅತೀವ ಹೆಮ್ಮೆಯಾಗುತ್ತಿದೆ.
Tuesday, 25 February 2020
ಸಿದ್ಧಾಪುರ ಪ್ರೌಢಶಾಲೆಯಲ್ಲಿ ಜಲಜಾಗೃತಿ ಶಿಬಿರ
ಜಿಲ್ಲಾ ಅಂತರ್ಜಲ
ಕಛೇರಿ, ಉಡುಪಿ ಇವರ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಇಲ್ಲಿ ಒಂದುದಿನದ ಅಂತರ್ಜಲ ಜಾಗೃತಿ
ಶಿಬಿರವನ್ನು ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ಪಂಚಾಯತಿನ ಸದಸ್ಯರಾದ ಶ್ರೀ ರೋಹಿತ್ ಶೆಟ್ಟಿ ಶಿಬಿರವನ್ನು
ಉದ್ಘಾಟಿಸುವರು. ಸಿದ್ಧಾಪುರ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಸರೋಜಿನಿ ಶೆಡ್ತಿ ಸಭೆಯ ಅಧ್ಯಕ್ಷತೆ
ವಹಿಸುವರು. ಕುಂದಾಪುರ ತಾಲೂಕು ಪಂಚಾಯತಿನ ಸದಸ್ಯರಾದ ಶ್ರೀ ವಾಸುದೇವ ಪೈ ಇದೇ ಸಮಾರಂಭದಲ್ಲಿ ಜಲಜಾಗೃತಿಯ ಕಿರು
ಹೊತ್ತಗೆಯನ್ನು ಬಿಡುಗಡೆಗೊಳಿಸುವರು.
ಇಕೋ ಕ್ಲಬ್-ಚಟುವಟಿಕೆ ವಿವರಗಳಿಗಾಗಿ
Monday, 24 February 2020
ಗಾಂಧಿ ಪಯಣ- ರಂಗಾಯಣ ನಾಟಕ
ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ
ಸರಕಾರಿ ಪ್ರೌಢಶಾಲೆ ಸಿದ್ಧಾಪುರ ಇಲ್ಲಿನ
ಸಭಾಂಗಣದಲ್ಲಿ
ರಂಗಾಯಣ ಮೈಸೂರು ಇವರಿಂದ ‘ಪಾಪು
ಗಾಂಧಿ ಬಾಪು ಗಾಂಧಿ ಆದ
ಕತೆ ‘ ಎಂಬ ನಾಟಕ ಅಭಿನಯವನ್ನು ನವೆಂಬರ್ 11 ರಂದು ವಿದ್ಯಾರ್ಥಿಗಳ
ಮನ ಮುಟ್ಟುವಂತೆ ಆಡಿ ತೋರಿಸಿದರು. ಗಾಂಧಿಯವರ
ಬಾಲ್ಯ ತಂದೆತಾಯಿಗಳ ಒಡನಾಟ , ಹರಿಶ್ಚಂದ್ರ ನಾಟಕ ಪ್ರಭಾವ
ದಕ್ಷಿಣ ಆಫ್ರಿಕಾದಲ್ಲಿಯ ಶೋಷಿತರ ಪರ ಹೋರಾಟ,
ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತದ ವಿಭಜನೆ,ಬಂಗಾಳದಲ್ಲಿಯ
ರಕ್ತಪಾತ , ಅವರ ಹತ್ಯೆಯಂತಹ ವಸ್ತು
ವಿಷಯವನ್ನು ವಿದ್ಯಾರ್ಥಿಗಳ ಮನಮಿಡಿಯುವಂತೆ ಕಲಾವಿದರು ಅಭಿನಯಿಸಿ
ತೋರಿಸಿದರು.
ಗಾಂಧಿ ಕಥಾನಕವನ್ನು ನವಿರು ನಿರೂಪಣೆಯೊಂದಿಗೆ ಕಟ್ಟಿಕೊಟ್ಟ
ಕಲಾವಿದರ ಕಲಾಭಿವ್ಯಕ್ತಿಯು ವಿದ್ಯಾರ್ಥಿಗಳ, ಶಿಕ್ಷಕರ
ಮನಸೂರೆಗೊಂಡಿತು.
ಶ್ರೀಪಾದ ಭಟ್ ಸಿರಸಿ ಇವರ
ನಿರ್ದೇಶನದಲ್ಲಿ ಮೂಡಿ ಬಂದ ಈ
ನಾಟಕವನ್ನು ಸಮುದಾಯ ಕುಂದಾಪುರ ಇವರು ಸಂಘಟಿಸಿದ್ದರು. ನಾಟಕದ ಆರಂಭಕ್ಕೂ ಮುನ್ನ
ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಸ್ಥರಾದ ಶ್ರೀಶೈಲೇಂದ್ರನಾಥ್
ಕೆ ಎನ್ ರವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀ ಡಾ| ಜಗದೀಶ್ ಶೆಟ್ಟಿ ಯವರು
ಕಾರ್ಯಕ್ರಮವನ್ನು ಉದ್ಘಾಟಿಸಿ ಗಾಂಧಿ ಯುಗಪ್ರವರ್ತಕ ,ನಡೆ
ನುಡಿಯಲ್ಲಿ ಒಂದಾದ ವ್ಯಕ್ತಿ , ಇವರ ವ್ಯಕ್ತಿತ್ವವನ್ನು ಅರಿತು ರೂಢಿಸಿಕೊಳ್ಳ ಬೇಕಾದ
ಅಗತ್ಯವನ್ನು ಪ್ರತಿಪಾದಿಸಿದರು .ಎನ್ .ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ
ಶ್ರೀ ರಮಾನಂದ ನಾಯಕ ಶಿರಗುಂಜಿ
ರವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿಜ್ಞಾನ ಶಿಕ್ಷಕರೂ, ಸಮುದಾಯ ಕುಂದಾಪುರ ಇದರ
ಪದಾಧಿಕಾರಿಗಳಾದ ಶ್ರೀ ಉದಯ ಗಾಂವಕಾರವರು ಕಾರ್ಯ ಕ್ರಮಕ್ಕೆ ನೆರವಾದ
ಸರ್ವರನ್ನೂ ವಂದಿಸಿದರು. ಶಾಲಾ ಸಮಸ್ತ ಶಿಕ್ಷಕ
ಸಿಬ್ಬಂದಿಗಳು ಉಪಸ್ಥಿತರಿದ್ದರು.
Subscribe to:
Posts (Atom)