Monday 24 February 2020

ಗಾಂಧಿ ಪಯಣ- ರಂಗಾಯಣ ನಾಟಕ





ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸರಕಾರಿ ಪ್ರೌಢಶಾಲೆ ಸಿದ್ಧಾಪುರ ಇಲ್ಲಿನ
ಸಭಾಂಗಣದಲ್ಲಿ ರಂಗಾಯಣ ಮೈಸೂರು ಇವರಿಂದಪಾಪು ಗಾಂಧಿ ಬಾಪು ಗಾಂಧಿ ಆದ ಕತೆಎಂಬ ನಾಟಕ ಅಭಿನಯವನ್ನು ನವೆಂಬರ್ 11 ರಂದು ವಿದ್ಯಾರ್ಥಿಗಳ ಮನ ಮುಟ್ಟುವಂತೆ ಆಡಿ ತೋರಿಸಿದರು. ಗಾಂಧಿಯವರ ಬಾಲ್ಯ ತಂದೆತಾಯಿಗಳ ಒಡನಾಟ , ಹರಿಶ್ಚಂದ್ರ ನಾಟಕ ಪ್ರಭಾವ ದಕ್ಷಿಣ ಆಫ್ರಿಕಾದಲ್ಲಿಯ ಶೋಷಿತರ ಪರ ಹೋರಾಟ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತದ ವಿಭಜನೆ,ಬಂಗಾಳದಲ್ಲಿಯ ರಕ್ತಪಾತ , ಅವರ ಹತ್ಯೆಯಂತಹ ವಸ್ತು ವಿಷಯವನ್ನು ವಿದ್ಯಾರ್ಥಿಗಳ ಮನಮಿಡಿಯುವಂತೆ ಕಲಾವಿದರು ಅಭಿನಯಿಸಿ ತೋರಿಸಿದರು.
ಗಾಂಧಿ ಕಥಾನಕವನ್ನು ನವಿರು ನಿರೂಪಣೆಯೊಂದಿಗೆ ಕಟ್ಟಿಕೊಟ್ಟ ಕಲಾವಿದರ ಕಲಾಭಿವ್ಯಕ್ತಿಯು ವಿದ್ಯಾರ್ಥಿಗಳ, ಶಿಕ್ಷಕರ
ಮನಸೂರೆಗೊಂಡಿತು. ಶ್ರೀಪಾದ ಭಟ್ ಸಿರಸಿ ಇವರ ನಿರ್ದೇಶನದಲ್ಲಿ ಮೂಡಿ ಬಂದ ನಾಟಕವನ್ನು ಸಮುದಾಯ ಕುಂದಾಪುರ ಇವರು ಸಂಘಟಿಸಿದ್ದರು. ನಾಟಕದ ಆರಂಭಕ್ಕೂ ಮುನ್ನ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಸ್ಥರಾದ ಶ್ರೀಶೈಲೇಂದ್ರನಾಥ್ ಕೆ ಎನ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಶ್ರೀ ಡಾ| ಜಗದೀಶ್ ಶೆಟ್ಟಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಗಾಂಧಿ ಯುಗಪ್ರವರ್ತಕ ,ನಡೆ ನುಡಿಯಲ್ಲಿ ಒಂದಾದ ವ್ಯಕ್ತಿಇವರ ವ್ಯಕ್ತಿತ್ವವನ್ನು ಅರಿತು ರೂಢಿಸಿಕೊಳ್ಳ ಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು .ಎನ್ .ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ರಮಾನಂದ ನಾಯಕ ಶಿರಗುಂಜಿ ರವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜ್ಞಾನ ಶಿಕ್ಷಕರೂ, ಸಮುದಾಯ ಕುಂದಾಪುರ ಇದರ ಪದಾಧಿಕಾರಿಗಳಾದ ಶ್ರೀ ಉದಯ ಗಾಂವಕಾರವರು ಕಾರ್ಯ ಕ್ರಮಕ್ಕೆ ನೆರವಾದ ಸರ್ವರನ್ನೂ ವಂದಿಸಿದರು. ಶಾಲಾ ಸಮಸ್ತ ಶಿಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

2 comments: