Tuesday, 25 February 2020

ಸಿದ್ಧಾಪುರ ಪ್ರೌಢಶಾಲೆಯಲ್ಲಿ ಜಲಜಾಗೃತಿ ಶಿಬಿರ


ಜಿಲ್ಲಾ ಅಂತರ್ಜಲ ಕಛೇರಿ, ಉಡುಪಿ ಇವರ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಇಲ್ಲಿ ಒಂದುದಿನದ ಅಂತರ್ಜಲ ಜಾಗೃತಿ ಶಿಬಿರವನ್ನು ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ಪಂಚಾಯತಿನ ಸದಸ್ಯರಾದ ಶ್ರೀ ರೋಹಿತ್ ಶೆಟ್ಟಿ ಶಿಬಿರವನ್ನು ಉದ್ಘಾಟಿಸುವರು. ಸಿದ್ಧಾಪುರ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಸರೋಜಿನಿ ಶೆಡ್ತಿ ಸಭೆಯ ಅಧ್ಯಕ್ಷತೆ ವಹಿಸುವರು. ಕುಂದಾಪುರ ತಾಲೂಕು ಪಂಚಾಯತಿನ ಸದಸ್ಯರಾದ  ಶ್ರೀ ವಾಸುದೇವ ಪೈ ಇದೇ ಸಮಾರಂಭದಲ್ಲಿ ಜಲಜಾಗೃತಿಯ ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸುವರು.


ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಮಹೇಶ ನಾಯಕ್, ಭೂವಿಜ್ಞಾನಿಗಳಾದ ಶ್ರೀ ರಾನ್ ಜಿ ನಾಯ್ಕ್, ಶ್ರೀಮತಿ ಜಾನಕಿ ಪಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶೈಲೇಂದ್ರನಾಥ್ ವರ ಗಣ್ಯ ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದ ನಂತರ ರತ್ನಶ್ರೀ ಜೊಸೆಫ್ ರೆಬೆಲ್ಲೋ ವಿದ್ಯಾರ್ಥಿಗಳೊಂದಿಗೆ ಅಂತರ್ಜಲ ಸಂರಕ್ಷಣೆಯ ಕುರಿತು ಮಾತನಾಡುವರು ಎಂದು  ಉಡುಪಿ ಜಿಲ್ಲಾ ಅಂತರ್ಜಲ ಕಛೇರಿಯ ಹಿರಿಯ ಭೂವಿಜ್ಞಾನಿಗಳಾದ ಡಾ. ದಿನಕರ ಶೆಟ್ಟಿ ಪ್ರಕಟಿಸಿರುವರು.

ಇಕೋ ಕ್ಲಬ್-ಚಟುವಟಿಕೆ ವಿವರಗಳಿಗಾಗಿ


No comments:

Post a Comment